ಎರಡು ವಾರಗಳ ಹಿಂದೆ ಗೊಥೆನ್ ಬರ್ಗ್ ನಲ್ಲಿ ಕಲ್ಚರ್ ಕಲಾಸೆಟ್ ನ ಸಂಭ್ರಮ. ನಾಲ್ಕು ದಿನಗಳ ಕಾಲ ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ನಿವಲ್ ಗಳು ಜನಮನ ರಂಜಿಸಿದ್ದವು.ಇದು ಪ್ರಾರಂಭವಾಗಿದ್ದು ಗುರುವಾರವಾದರೂ, ವಾರದ ಮಧ್ಯದಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಕೆಲವು ಮಳಿಗೆಗಳನ್ನು ಬಿಟ್ಟರೆ ನೋಡುವಂತದ್ದೇನಿರಲಿಲ್ಲ. ಹಬ್ಬದ ಕೊನೆಯ ದಿನವಾಗಿದ್ದ ಭಾನುವಾರದಂದು ಮಾತ್ರ ಇಡಿಯ ಪಟ್ಟಣಕ್ಕೆ ಹೊಸ ಮೆರುಗು ಬಂದಿತ್ತು. ಎತ್ತ ನೋಡಿದರೂ ಜನವೋ ಜನ. ಸಾಮಾನ್ಯವಾಗಿ ಹೆಚ್ಚು ಜನರಿಲ್ಲದೆ ಖಾಲಿ ಎಂದೆನಿಸುವ ಬೀದಿಗಳು ಅಂದು ಮಾತ್ರ ಗಿಜಿಗಿಜಿಗುಟ್ಟುತ್ತಿದ್ದವು.
ಮಳೆಯ ಮುನ್ಸೂಚನೆ ಇದ್ದುದರಿಂದ ಜೊತೆಗೊಂದು ಕೊಡೆಯನ್ನು ಎತ್ತಿಕೊಂಡೇ ಭಾನುವಾರ ಮಧ್ಯಾಹ್ನ ಹೊರಹೊರಟೆವು. ಮೊದಲು ಭೇಟಿ ನೀಡಿದ್ದು ಪಟ್ಟಣದ ಮಧ್ಯದಲ್ಲಿಯೇ ಇದ್ದ ಅಂತರರಾಷ್ಟ್ರೀಯ ತಿಂಡಿ ತಿನಿಸುಗಳ ಮಾರುಕಟ್ಟೆ. ಹಾಲೆಂಡ್ , ಫ್ರಾನ್ಸ್, ಗ್ರೀಸ್ , ಥೈಲ್ಯಾಂಡ್ ಮುಂತಾದ ಹಲವು ದೇಶಗಳ ತಿನಿಸುಗಳು ಅಲ್ಲಿದ್ದವು. ಹೆಚ್ಚಿನವು ಮಾಂಸಾಹಾರವಾಗಿದ್ದರೂ, ಸಸ್ಯಾಹಾರಿಗಳಿಗೂ ಬಹಳಷ್ಟು ಆಯ್ಕೆಗಳಿದ್ದವು. ರಾಶಿ ರಾಶಿ ಸುರಿದುಕೊಂಡಿದ್ದ ಟ್ರಫಲ್ ಗಳು ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ.ವೆನಿಲ್ಲಾ, ಚಾಕಲೇಟ್, ಲೆಮನ್, ರೋಸ್, ಆಪಲ್ ಹೀಗೆ ಅದೆಷ್ಟೋ ಬಗೆಯ , ನಾನಾ ವರ್ಣದ ಮಕರೂನ್ ಗಳನ್ನು ಪೇರಿಸಿಟ್ಟಿದ್ದರು.ಬಣ್ಣ ಬಣ್ಣದ ಹೂಗಿಡಗಳು, ಬೋನ್ಸಾಯ್ ಗಿಡಗಳು, ಟುಲಿಪ್ ತಳಿಗಳು ಮುಂತಾದ ಬಹಳಷ್ಟು ಸಸಿಗಳು ಮಾರಾಟಕ್ಕಿದ್ದವು. ಹೂವು ಹಣ್ಣಿನ ಪರಿಮಳಯುಕ್ತ ಸೋಪುಗಳು ಸಹ ಮಾರಾಟಕ್ಕಿದ್ದವು

ಕಾರ್ನಿವಲ್ ನ ಸೊಬಗು |
ಕಥಕ್ ನೃತ್ಯ ಪ್ರದರ್ಶನ |
ಭರತನಾಟ್ಯ ಪ್ರದರ್ಶನ ಗೀತಾ ಚಂದ್ರನ್ ಅವರಿಂದ |
ಇವಿಷ್ಟಲ್ಲದೆ ಕೆಲವೆಡೆ ಉಚಿತವಾಗಿ ಬೋಟಿಂಗ್ ಕರೆದುಕೊಂಡು ಹೋಗಲಾಗುತಿತ್ತು. ಉಚಿತವಾಗಿ ಪರಿಣಿತರಿಂದ ೧೦ ನಿಮಿಷಗಳ ಸೇಲಿಂಗ್ ಕೂಡ ನಡೆಸಲಾಗುತ್ತಿತ್ತು. ವರ್ಚುಯಲ್ ರಿಯಾಲಿಟಿಯಾ ವಿಡಿಯೋ ಗಳನ್ನು ನೋಡಬಹುದಾಗಿತ್ತು. ಇನ್ನು ಮುಂತಾದ ಹಲವು ಆಕರ್ಷಣೆಗಳು ಅಲ್ಲಿದ್ದವು. ಇವೆಲ್ಲವನ್ನೂ ನೋಡಿಕೊಂಡು ಬಿಸಿಬಿಸಿಯಾಗಿ ಫಲಾಫಲ್ , ತಣ್ಣಗಿನ ಐಸ್ ಕ್ರೀಮ್ ತಿಂದು ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.
No comments:
Post a Comment