Saturday 1 February 2020

ಕ್ಯಾರಿ - ಸ್ಟೆಫೆನ್ ಕಿಂಗ್


ಹಾರರ್ , ಥ್ರಿಲ್ಲರ್  ಕಥೆಗಳ ಮೂಲಕ  ಪ್ರಸಿದ್ದಿ ಪಡೆದ ಸ್ಟೆಫೆನ್ ಕಿಂಗ್ ರ ಕ್ಯಾರಿ ಪುಸ್ತಕವನ್ನ ಕೈಗೆತ್ತಿಕೊಂಡಿದ್ದೆ. ಕೆಲವು ಪುಟಗಳನ್ನ ತಿರುವಿಹಾಕುವುದರೊಳಗಾಗಿ ಪೂರ್ತಿ ಕಥೆಯ ಹಿಡಿತ ಸಿಕ್ಕಿಬಿಡುತ್ತದೆ. ಆದರೂ ಮುಂದೆ ಓದಿಸಿಕೊಂಡು ಹೋಗುತ್ತದೆಂಬುದು ಇದರ ಧನಾತ್ಮಕ ಅಂಶ. 

ಇದು ಅವರ ಮೊದಲ ಪುಸ್ತಕ. ಕ್ಯಾರಿ ಎನ್ನುವ ಪಾತ್ರದ ಸುತ್ತ ಸುತ್ತುವ ಕಥೆ. ತನ್ನ ತಾಯಿಯ ವಿಪರೀತ ಎನಿಸುವಂತಹ  ಧಾರ್ಮಿಕತೆಯ ಮಧ್ಯೆ ಬೆಳೆಯುವ ಆಕೆ, ಬೇರೆಲ್ಲ ಸ್ನೇಹ ಸಂಬಂಧಗಳಿಂದ ವಂಚಿತೆ. ನಿತ್ಯವೂ ಸಹಪಾಠಿಗಳಿಂದ ಕಿರುಕುಳ, ಅವಮಾನಕ್ಕೆ ಗುರಿಯಾಗುತ್ತಿರುತ್ತಾಳೆ. ಆದರೆ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ ಅವಳು. ತನ್ನ ಮನಸ್ಸಿನ ಮೂಲಕವೇ ವಸ್ತುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬಲ್ಲ ಟೆಲಿಕೈನೆಟಿಕ್ ಶಕ್ತಿ ಆಕೆಗೊಲಿದಿರುತ್ತದೆ. 

ಹೈಸ್ಕೂಲು ಕೊನೆಯ ವರ್ಷದ ಪ್ರಾಮ್ ನೈಟ್ ಗೆ ಸಹಪಾಠಿಯೊಂದಿಗೆ ಕ್ಯಾರಿ ವೈಟ್ ಗೆ ಕನಸೋ, ನಿಜವೋ ಎನ್ನುವಷ್ಟು ಸುಂದರವೆನಿಸುತ್ತದೆ ಆ ರಾತ್ರಿ. ಆದರೆ ಅಲ್ಲಾಗಲೇ ಆಕೆಯ ವಿರುದ್ಧ ಸಂಚೊಂದು ರೂಪುಗೊಂಡಿರುತ್ತದೆ. ಅದರ ಸುಳಿಗೆ ಸಿಕ್ಕಿಬಿದ್ದು ಅವಮಾನಿತಳಾದಾಗ ಕ್ಯಾರಿ ತನ್ನ ಅತಿಮಾನುಷ ಶಕ್ತಿಯ ಮೊರೆಹೋಗುತ್ತಾಳೆ. ಮುಂದೆ ? ಓದಿ ನೋಡಿ. 

ಮೇಲೆ ಹೇಳಿದಂತೆ ಮೊದಲ ಕೆಲ ಪುಟಗಳಲ್ಲೇ ಪೂರ್ತಿ ಸಾರಾಂಶ ಅಡಗಿದ್ದರೂ, ಕ್ಯಾರಿ ಕಾಡುವ ನೆನಪಿನಲ್ಲುಳಿಯುವ ಪಾತ್ರ. 

2 comments:

  1. hai.
    ನಿಮ್ಮ ಪುಸ್ತಕಗಳ ಬಗ್ಗೆ ನಿಮ್ಮ ಲೇಖನಗಳನ್ನು ಓದಿದೆ ತುಂಬಾ ಇಷ್ಟವಾಯ್ತು,ನೀವು ಯಾಕೆ ಅನುವಾದ ಮಾಡಬಾರದು?

    ReplyDelete
  2. ಧನ್ಯವಾದಗಳು ನಿಮಗೆ.

    ಮಾಡಬಹುದು. ಅದರ ಬಗ್ಗೆ ಯೋಚಿಸುತ್ತೇನೆ. :)

    ReplyDelete